ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ - 2024
ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ - 2024
ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ - 2024
Share:
₹15,999
SKU :
100
Description

ಉದ್ದೇಶಿತ ಸಮೂಹ: ನಾಗರಿಕ ಸೇವಾ ಮುಖ್ಯ ಪರೀಕ್ಷೆ - 2024 ಬರೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಮೂರೇ ತಿಂಗಳಲ್ಲಿ ಕನ್ನಡ ಸಾಹಿತ್ಯವನ್ನು ಪುನರಾವರ್ತನೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳು.

ಪ್ರತಿ ವರ್ಷವೂ ಐಚ್ಛಿಕ ವಿಷಯ ಕನ್ನಡ ಸಾಹಿತ್ಯವು ಹತ್ತಾರು ಕನ್ನಡಿಗರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಫಲಗೊಳ್ಳಲು ಸಹಕಾರಿಯಗುತ್ತಿದೆ. ಆಳವಾದ ಅಧ್ಯಯನ ಹಾಗೂ ಸಮರ್ಪಕ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಈ ವಿಷಯದಲ್ಲಿ ಒಳ್ಳೆಯ ಅಂಕಗಳನ್ನು ಗಳಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಮೆಂಟರ್ಸ್4ಐಎಎಸ್ ಕನ್ನಡ ಸಾಹಿತ್ಯ ಪರೀಕ್ಷಾ ಸರಣಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಈ ವಿಷಯದ ಪಠ್ಯಕ್ರಮವನ್ನು ಕಡಿಮೆ ಸಮಯದಲ್ಲಿ ಅಭ್ಯಸಿಸುವುದು ಎಷ್ಟು ಮುಖ್ಯವೋ, ಉತ್ತರ ಬರೆಯುವ ಅಭ್ಯಾಸವನ್ನು ಮಾಡುವುದೂ ಅಷ್ಟೇ ನಿರ್ಣಾಯಕ. ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಅಧ್ಯಯನದ ಜೊತೆಗೆ ದಕ್ಷವಾಗಿ ಕನ್ನಡ ಸಾಹಿತ್ಯದ ಅಧ್ಯಯನ ಹಾಗೂ ಉತ್ತರ ಬರೆಯುವ ಅಭ್ಯಾಸವನ್ನು ಮಾಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಉತ್ತರ ಬರೆಯುವುದು ಒಂದು ಕಲೆ, ಹಾಗೂ ಒಂದು ವಿಜ್ಞಾನವೂ ಕೂಡ. ವಿದ್ಯಾರ್ಥಿಗಳು ಈ ಎರಡೂ ಅಂಶಗಳನ್ನು ಮೈಗೂಡಿಸಲು ಈ ಕಾರ್ಯಕ್ರಮ ಬಹು ಉಪಯೋಗಕಾರಿಯಾಗಲಿದೆ.

 

ಕಾರ್ಯಕ್ರಮದಲ್ಲಿ ಏನಿರುತ್ತದೆ?

· ಪಠ್ಯಕ್ರಮದ ನಾಲ್ಕು ವಿಭಾಗಗಳ ನಾಲ್ಕು ಸುತ್ತಿನ ಪುನರಾವರ್ತನೆ

· ಮೊದಲ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೧೨೫ ಅಂಕಗಳ ಅಣಕು ಪರೀಕ್ಷೆಗಳು

· ಎರಡನೇ ಸುತ್ತಿನಲ್ಲಿ ಎಲ್ಲ ವಿಭಾಗಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು

· ಮೂರನೇ ಸುತ್ತಿನಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು

· ನಾಲ್ಕನೇ ಸುತ್ತಿನಲ್ಲಿ ಒಂದೇ ದಿನದಲ್ಲಿ ಎರಡೂ ಪ್ರಶ್ನೆಪತ್ರಿಕೆಗಳ ಮೇಲೆ ೨೫೦ ಅಂಕಗಳ ಅಣಕು ಪರೀಕ್ಷೆಗಳು

· ಸಂಚಾಲಕರಿಂದಲೇ ಪ್ರತಿ ಅಣಕು ಪರೀಕ್ಷೆಯ ಮೌಲ್ಯಮಾಪನ

· ಮೌಲ್ಯಮಾಪನ ನಂತರ ಮುಖಾಮುಖಿ ಚರ್ಚೆಗೆ ಅವಕಾಶ

· ಮೌಲ್ಯವರ್ಧನಾ ತರಗತಿ/ಸಾಮಗ್ರಿ


ಇನ್ನಿತರ ಲಾಭಗಳು:

·  ವೈಯಕ್ತಿಕ ಯೋಜನೆ

·  ಯಶಸ್ಸು ಸಿಗುವವರೆಗೆ ಸಹಾಯ

·  ಒತ್ತಡ ನಿರ್ವಹಣೆ ಹಾಗೂ ಮಾನಸಿಕ ಬೆಂಬಲ

·   ಪ್ರಗತಿ ಪರಿಶೀಲನೆ

mentors4ias15 products on store
Payment types
Create your own online store for free.
Sign Up Now